ಸಿದ್ದು ಸರ್ಕಾರದಿಂದ ಶಾಕ್ ! ನಂದಿನಿ ಹಾಲಿನ ದರ 3ರೂ ಹೆಚ್ಚಳ

ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶುಕ್ರವಾರ ನೆಡೆದ ಕೆಎಂಎಫ್ ಅಧಿಕಾರಿಗಳ ಸಭೆಯಲ್ಲಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ 3ರೂ ಗಳನ್ನು ಹೆಚ್ಚಳ ಮಾಡಲು ತೀರ್ಮಾನಿಸಿದ್ದಾರೆ.ಈ ಪರಿಷ್ಕೃತ ದರ ಆಗಸ್ಟ್ 1ರಿಂದ ಅನ್ವಯವಾಗಲಿದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.

ಪ್ರತಿ ಲೀಟರ್ ಗೆ 5ರೂಗಳನ್ನು ಹೆಚ್ಚಳ ಮಾಡಬೇಕೆಂದು ಹೈನುಗಾರರ ಕಡೆಯಿಂದ ಬೇಡಿಕೆ ಬಂದಿತ್ತು ಆದರೆ 3ರೂ ಹೆಚ್ಚಳ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ, ರೈತರಿಂದ ಖರೀದಿ ಮಾಡುವ ಹಾಲಿಗೂ ಪ್ರತಿ ಲೀಟರ್ ಗೆ 3ರೂ ಹೆಚ್ಚಳ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಭೆಯಲ್ಲಿ ಪಶುಸಂಗೋಪನ ಸಚಿವ ಕೆ. ವೆಂಕಟೇಶ್, ಸಹಕಾರ ಸಚಿವ ಕೆ.ಎನ್ ರಾಜಣ್ಣ, ಕೆಎಂಎಫ್ ಅಧ್ಯಕ್ಷ ಭೀಮ್ ನಾಯ್ಕ್,ಕೆಎಂಎಫ್ ನಿರ್ದೇಶಕ ಎಚ್. ಡಿ. ರೇವಣ್ಣ ಸೇರಿ ಇತರ ಅಧಿಕಾರಿಗಳು ಭಾಗಿಯಾಗಿದ್ದರು.