ಕಳೆದ ಸರ್ಕಾರದ ಅವಧಿಯಲ್ಲಿ ನೆಡೆದ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿಯಲ್ಲಿ ನೆಡೆದ ಗಲಭೆಯಲ್ಲಿ ಅಮಾಯಕ ಯುವಕರು ಬಂಧಿತರಾಗಿದ್ದಾರೆಂದು ಅವರುಗಳನ್ನು ಬಿಡುಗಡೆ ಮಾಡುವಂತೆ ಹಲವು ಶಾಸಕರುಗಳು ಗೃಹಸಚಿವ ಪರಮೇಶ್ವರ್ ಅವರಲ್ಲಿ ಮನವಿ ಮಾಡಿದ್ದಾರೆ.

ಡಿಜೆ ಹಳ್ಳಿ ಗಲಭೆಯನ್ನು ಕರ್ನಾಟಕ ಹೈಕೋರ್ಟ್ “ಭಯೋತ್ಪಾದನಾ ಕೃತ್ಯ” ಎಂದು ಬಣ್ಣಿಸಿದೆ, ಇದರಲ್ಲಿ ಉದ್ರಿಕ್ತರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದರು, ಪೊಲೀಸರು ಗಾಯಗೊಂಡರು, ಡಿಸಿಪಿ ವಾಹನದ ಮೇಲೆ ದಾಳಿ ಮಾಡಿದರು ಮತ್ತು ಕಾಂಗ್ರೆಸ್ ಶಾಸಕರಾಗಿದ್ದ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಲಾಗಿತ್ತು.
ಹುಬ್ಬಳ್ಳಿಯಲ್ಲಿ ದೇವಸ್ಥಾನ ಮತ್ತು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದರು.
ಶಿವಮೊಗ್ಗದಲ್ಲಿ ಗುಂಪೊಂದು ಹಿಂದೂ ಅಂಗಡಿಗಳ ಮೇಲೆ ದಾಳಿ ಮಾಡಿ ಅಮಾಯಕ ಹಿಂದೂ ಕಾರ್ಯಕರ್ತರನ್ನು ಕೊಂದು ಹಾಕಿದ್ದರು.
ಇದೀಗ ಗೃಹ ಸಚಿವ ಪರಮೇಶ್ವರ್ ಅವರು ಈ ಗೂಂಡಾಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯುವಂತೆ ಗೃಹ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆಂದು ಬಸವನಗೌಡ. ಆರ್ ಪಾಟೀಲ್ ಅವರು ಕಿಡಿಕಾರಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.