ತುಮಕೂರು ರಾ.ಹೆ 48 ಅನ್ನು ಪರಿಶೀಲಿಸಿ ಕಟ್ಟು ನಿಟ್ಟಿನ ಕ್ರಮಕ್ಕೆ ಆದೇಶ ! ಎಡಿಜಿಪಿ ಅಲೋಕ್ ಕುಮಾರ್

ತುಮಕೂರು : ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಬುಧವಾರ ತುಮಕೂರಿಗೆ ಭೇಟಿ ನೀಡಿ ಎಸ್. ಪಿ ರಾಹುಲ್ ಕುಮಾರ್ ಶಹಪುರವಾಡ್ ಅವರೊಂದಿಗೆ ರಾ.ಹೆ.48ರ ವೀಕ್ಷಣೆ ನೆಡೆಸಿ ರಸ್ತೆ ಅಪಘಾತಗಳ ಕುರಿತು ಮಾಹಿತಿ ಪಡೆದರು.

ಅಪಘಾತ ವಲಯಗಳಿಗೆ ಭೇಟಿ ನೀಡಿ ಮತ್ತು ರಸ್ತೆ ಅಪಘಾತ ತಡೆಗಟ್ಟುವ ಸಂಬಂಧ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸಭೆಯನ್ನು ನಡೆಸಿ ರಸ್ತೆಯಲ್ಲಿ ಉಂಟಾಗುತ್ತಿರುವ ಅಪಘಾತಗಳನ್ನು ತಡೆಯಲು ಕಟ್ಟು ನಿಟ್ಟಿನ ಕ್ರಮ ಜರಗಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ತುಮಕೂರು ಜಿಲ್ಲಾಧಿಕಾರಿ ಶ್ರೀನಿವಾಸ್, ತುಮಕೂರು ಎಸ್. ಪಿ. ರಾಹುಲ್ ಕುಮಾರ್ ಶಹಪುರವಾಡ್, ಡಾ.ಬಿ. ಆರ್. ರವಿಕಾಂತೆಗೌಡ. ಐ ಪಿ ಎಸ್ , ಐ ಜಿ ಪಿ ಕೇಂದ್ರ ವಲಯ, ಹಾಗೂ ಹಲವು ಇಲಾಖೆಯ ಮುಖ್ಯಸ್ಥರು, ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.