ಸೆಲ್ಫಿ ತೆಗೆಯುವಾಗ ಕಾಲು ಜಾರಿ ಬಿದ್ದಿದ್ದ ಯುವಕನ ಮೃತದೇಹ ಪತ್ತೆ

ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಾಗ ಕಾಲು ಜಾರಿ ಹಾರಂಗಿ ನದಿಗೆ ಬಿದ್ದಿದ್ದ ಬೆಂಗಳೂರಿನ ಯುವಕ ಟ್ಯಾಟೊ ಆರ್ಟಿಸ್ಟ್ ಸಂದೀಪ್ ಮೃತ ದೇಹವನ್ನು ಕುಶಾಲನಗರದ ಅಗ್ನಿಶಾಮಕ ದಳ ಮತ್ತು ದುಬಾರೆ ರಿವರ್ ರಾಫ್ಟಿಂಗ್ ತಂಡವು ಕಾರ್ಯಾಚರಣೆ ನಡೆಸಿ ಹೊರ ತೆಗೆದಿದ್ದಾರೆ.

ಪ್ರವಾಸಕ್ಕೆಂದು ಸಂದೀಪ್ ಮತ್ತು ಸ್ನೇಹಿತರು ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ್ದು ಈ ವೇಳೆ ಜಲಾಶಯದ ಮುಂಭಾಗದ ಸೇತುವೆ ಮೇಲೆ ಸೆಲ್ಫಿ ತೆಗೆಯುವಾಗ ಕಾಲುಜಾರಿ ನದಿ ಪಾಲಗಿದ್ದರು, ನದಿಯಲ್ಲಿ ಮುಳುಗುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.