ಭಾರತೀಯ ರೈಲ್ವೆ ಇತಿಹಾಸದಲ್ಲೇ ಹೊಸ ಅಧ್ಯಾಯ ! ಭಾರತದ ಅಮೃತಕಾಲ ಆರಂಭ – ಪ್ರಧಾನಿ ಮೋದಿ

ಕರ್ನಾಟಕದ 13 ರೈಲು ನಿಲ್ದಾಣಗಳನ್ನೊಳಗೊಂಡು ಭಾರತದಲ್ಲಿ ಒಟ್ಟು 508 ರೈಲ್ವೆ ನಿಲ್ದಾಣಗಳನ್ನು ಬರೋಬ್ಬರಿ 25,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ಮಾಡಿದ್ದಾರೆ.

ಭಾರತದಲ್ಲಿ ಒಟ್ಟಾರೆ 1300 ಪ್ರಮುಖ ರೈಲು ನಿಲ್ದಾಣಗಳು ಅಮೃತ್ ಭಾರತ್ ರೈಲು ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗುವುದು, ಅದರಲ್ಲಿ 508 ರೈಲು ನಿಲ್ದಾಣಗಳಿಗೆ ಈಗಾಗಲೇ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಭಾರತವು ತನ್ನ ಅಮೃತಕಾಲದ ಆರಂಭದಲ್ಲಿದೆ ಅಭಿವೃದ್ಧಿಯ ಗುರಿಯತ್ತ ಸಾಗುತ್ತಿದೆ ನಮ್ಮಲ್ಲಿ ಹೊಸ ಶಕ್ತಿ, ಸ್ಫೂರ್ತಿ, ಮತ್ತು ಹೊಸ ಸಂಕಲ್ಪಗಳಿವೆ, ಮತ್ತು ಇದೇ ಉತ್ಸಾಹದಲ್ಲಿ ಭಾರತೀಯ ರೈಲ್ವೆ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಪ್ರಾರಂಭವಾಗುತ್ತಿದೆ ಎಂದು ಹೇಳಿದರು.