ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿರುವ ನಾಮದ ಚಿಲುಮೆಯ ಅಭಿವೃದ್ಧಿಗಾಗಿ ರೂ. 37 ಕೋಟಿ ಅನುದಾನದಲ್ಲಿ ನಾಮದ ಚಿಲುಮೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದಾಗಿ ಶಾಸಕ ಬಿ.ಸುರೇಶ ಗೌಡ ತಿಳಿಸಿದರು.
ನಾಮದ ಚಿಲುಮೆ ಅಭಿವೃದ್ಧಿ ಬಗ್ಗೆ ನಾಮದ ಚಿಲುಮೆಯ ಅತಿಥಿ ಗೃಹದಲ್ಲಿ ನಡೆದ ಸಭೆಯನ್ನು ಶಾಸಕ ಬಿ.ಸುರೇಶಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತುಮಕೂರು ನಗರದ ಕೂಗಳತೆಯಲ್ಲಿರುವ ದೇವರಾಯನದುರ್ಗದ ಅರಣ್ಯ ಪ್ರದೇಶವು ಪ್ರಕೃತಿಯ ಸೊಬಗಿನ ಜೊತೆಗೆ ಅಪರೂಪದ ಪ್ರಾಣಿ ಪಕ್ಷಿಗಳ ಸಂಕಲನವನ್ನೇ ಹೊಂದಿರುವಂತ ದಟ್ಟ ಅರಣ್ಯ ಇರುವುದು ನಮ್ಮ ತುಮಕೂರುಜಿಲ್ಲೆಯ ಹೆಮ್ಮೆಯಾಗಿದೆ.
ಇದೊಂದು ಯಾತ್ರ ಸ್ಥಳವಾಗಿದ್ದು ಪ್ರಭುಶ್ರೀರಾಮಚಂದ್ರರು ಕೂಡ ಈ ಸ್ಥಳಕ್ಕೆ ಬಂದುಹೋಗಿರುವ ಇತಿಹಾಸ ಕೂಡ ಇದೆ ಎಂದರು.
37 ಕೋಟಿ ರೂಪಾಯಿಗಳ ಅನುದಾನದಲ್ಲಿ ಸದರೀ ಪ್ರದೇಶದಲ್ಲಿರುವ ಕೆರೆಯ ಅಭಿವೃದ್ಧಿಯ ಜೊತೆಗೆ ಮಕ್ಕಳಿಗೆ ಮನೋರಂಜನೆಗಾಗಿ ಬೋಟಿಂಗ್ ವ್ಯವಸ್ಥೆ, ವಾಕಿಂಗ್ ಪಾಥ್,ಪರಗೋಲ ಸೇರಿದಂತೆ ಮೂಲಭೂತ ಸೌಲಭ್ಯ ಸೌಕರ್ಯಗಳನ್ನು ಒದಗಿಸುವಂತೆ ಸೂಚಿಸಿದರು.ಆಧುನಿಕ ಸ್ಪರ್ಶತೆ ಉಳ್ಳ ಆಟದ ಸಾಮಗ್ರಿಗಳನ್ನು ಜೋಡಿಸಿ ಮನೋರಂಜನೆಗಾಗಿ ಜಿಪ್ ಲೈನ್,ರೋಪ್ ವೇ, ಮ್ಯೂಸಿಕಲ್ ಫೌಂಟೇನ್,ಸೇರಿದಂತೆ ಹಾಗೂ ಯೋಗ ಮತ್ತು ಧ್ಯಾನಮಾಡಲು ನಾಗರೀಕರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಲು ತಿಳಿಸಿದರು.
ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿರುವಎಲ್ಲ ಪ್ರಾಣಿ ಪಕ್ಷಿಗಳ ರಕ್ಷಣೆಗಾಗಿ ಸೂಕ್ತ ಕ್ರಮಜರುಗಿಸಬೇಕು ಪ್ರಾಣಿ ಪಕ್ಷಿಗಳಿಗೆ ಆಹಾರಮತ್ತು ನೀರು ಕೊರತೆಯಾಗದಂತೆ ಗೋಕಟ್ಟೆ ,ಚೆಕ್ ಡ್ಯಾಂ ಹಾಗೂ ನಾಲಾ ಬದುಗಳ ನಿರ್ಮಾಣಮಾಡುವಂತೆ ಸೂಚಿಸಿದರು. ದೇಶದಲ್ಲಿ ಎಲ್ಲೂ ಕಾಣದೆ ಸಿಗುವಂತಹ ಪ್ರಾಣಿಗಳಲ್ಲಿ ಅಪರೂಪದ ಪ್ರಾಣಿಯಾಗಿರುವ ಕಾಡು ಪಾಪ ನಮ್ಮ ತುಮಕೂರು ತಾಲೂಕಿನ ನಾಗವಲ್ಲಿ ಭಾಗದಲ್ಲಿದ್ದು ಇದನ್ನು ರಾಜ್ಯ ಪ್ರಾಣಿ ಎಂದು ಘೋಷಿಸುವಂತೆ ಅರಣ್ಯ ಮಂತ್ರಿಗಳಿಗೆ ಪತ್ರ ಬರೆದು ಚರ್ಚಿಸುವುದಾಗಿ ತಿಳಿಸಿದರು. ಪ್ರಾಣಿಗಳಿಗೂ ಕೂಡ ನಮ್ಮ ನಡುವೆ ಬದುಕುವಂತ ಹಕ್ಕು ಇದೆ ಬೇಸಿಗೆಯಲ್ಲಿ ಅರಣ್ಯಕ್ಕೆ ಬೆಂಕಿ ಇಡುವವರ ಬಗ್ಗೆ ಹಾಗೂ ಪ್ರಾಣಿಗಳಿಗೆ ಉರುಳು ಹಾಕುವುದು ಕರೆಂಟು ಬಿಡುವುದು ಮತ್ತು ಹಿಂಸೆ ಮಾಡುವಂಥವರ ಬಗ್ಗೆ ಗಮನಹರಿಸಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದರು.
ಸಭೆಯಲ್ಲಿ ಉಪ ಸಂರಕ್ಷಣಾ ಅಧಿಕಾರಿಅನುಪಮ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಮಹೇಶ್, ವಲಯಅರಣ್ಯ ಅಧಿಕಾರಿಪವಿತ್ರ,ಟಿ.ವಿ.ಎನ್ ಮೂರ್ತಿ ಉಪಸ್ಥಿತರಿದ್ದರು.