ಗುಬ್ಬಿ ಬಳಿ ಭೀಕರ ರಸ್ತೆ ಅಪಘಾತ ! ಸ್ಥಳದಲ್ಲೇ ಸವಾರ ಸಾವು

ಗುಬ್ಬಿ ; ತಾಲ್ಲೋಕಿನ ಸಿ.ಎಸ್ ಪುರ ಸಮೀಪ ಲಗೇಜ್ ಆಟೋ ಮತ್ತು ಮಾರುತಿ ಕಾರು ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ದಂಪತಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೆ.ಜಿ ಟೆಂಪಲ್ ಸಂತೆಗೆ ವ್ಯಾಪಾರಕ್ಕೆಂದು ಕಲ್ಲೂರಿನ ನಿವಾಸಿಯಾದ ನಾಗರಾಜ್ (60) ಮತ್ತು ಅವರ ಪತ್ನಿ ಲಗೇಜ್ ಆಟೋದಲ್ಲಿ ತೆರಳುತ್ತಿರುವಾಗ ಸಿ.ಎಸ್ ಪುರ ಸಮೀಪದ ಅರಿವೇಸಂದ್ರ ಬಳಿ ಅಪಘಾತ ಸಂಭವಿಸಿದೆ, ಅಪಘಾತದ ತೀವ್ರತೆಗೆ ಆಟೋ ಚಲಾಯಿಸುತ್ತಿದ್ದ ನಾಗರಾಜ್(60) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಅವರ ಪತ್ನಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಸ್ಥಳಕ್ಕೆ ಸಿ.ಎಸ್ ಪುರ ಠಾಣೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.