ತುಮಕೂರು : ನಗರದ ಶಿವಕುಮಾರ ಸ್ವಾಮೀಜಿ ವೃತ್ತದ ಬಳಿಯಿರುವ ಕೆಪಿಟಿಸಿಎಲ್ ಕಚೇರಿಯಲ್ಲಿ ಬುಧವಾರ ಚೀಫ್ ಇಂಜಿನಿಯರ್ ನಾಗರಾಜನ್ 50 ಸಾವಿರ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕು ಬಿದ್ದಿದ್ದಾರೆ.
ಕೆಪಿಟಿಸಿಎಲ್ ಚೀಫ್ ಇಂಜಿನಿಯರ್ ನಾಗರಾಜನ್ ಅವರು ಕಾರ್ಖಾನೆಯೊಂದಕ್ಕೆ ಪವರ್ ಲೈನ್ ಎಳೆಯಲು ಅನುಮತಿ ನೀಡಲು ಗುತ್ತಿಗೆದಾರರೊಬ್ಬರಿಂದ 1 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದರು, ಆಗಸ್ಟ್ 4ರಂದು 50 ಸಾವಿರ ರೂಗಳನ್ನು ಮುಂಗಡವಾಗಿ ಪಾವತಿಸಿದ್ದರು, ಇನ್ನುಳಿದ 50 ಸಾವಿರ ರೂಗಳನ್ನು ಬುಧವಾರದಂದು ನೀಡುವಾಗ ಲೋಕಾಯುಕ್ತ ಪೋಲೀಸರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ದಾಳಿ ನೆಡೆಸಿ ಬಂಧಿಸಿದ್ದಾರೆ.
ತುಮಕೂರು ಲೋಕಾಯುಕ್ತ ಎಸ್. ಪಿ. ಭಾಷಾ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನೆಡೆದಿದ್ದು, ಚೀಫ್ ಇಂಜಿನಿಯರ್ ನಾಗರಾಜನ್ ಅವರನ್ನು ವಶಕ್ಕೆ ಪಡೆದು ತನಿಖೆ ಪ್ರಾರಂಭಿಸಿದ್ದಾರೆ.