ತುಮಕೂರು : ಸಿದ್ದಗಂಗಾ ಮಠದ ಇಬ್ಬರು ವಿದ್ಯಾರ್ಥಿಗಳು ಸೇರಿ ಒಟ್ಟು ನಾಲ್ವರು ಸಿದ್ದಗಂಗಾ ಮಠದ ಹಿಂಭಾಗದಲ್ಲಿರುವ ಗೋಕಟ್ಟೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನೆಡೆದಿದೆ.
ರಾಮನಗರದ ಹರ್ಷಿತ್ (11), ಚಿಕ್ಕಮಗಳೂರು ಜಿಲ್ಲೆಯ ಶಂಕರ್ (11) ಈ ಇಬ್ಬರು ವಿದ್ಯಾರ್ಥಿಗಳು ಸಿದ್ದಗಂಗಾ ಮಠದಲ್ಲಿ 6ನೇ ತರಗತಿಯನ್ನು ಓದುತ್ತಿದ್ದರು, ಬೆಂಗಳೂರಿನ ಬಗಲಗುಂಟೆ ನಿವಾಸಿ ಲಕ್ಷ್ಮೀ (34), ಯಾದಗಿರಿಯ ಮಹದೇವಪ್ಪ (44) ಮೃತ ದುರ್ದೈವಿಗಳು.
ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ತಮ್ಮ ಪುತ್ರ ರಂಜಿತ್ ನನ್ನು ನೋಡಲು ಲಕ್ಷ್ಮೀ ಬೆಂಗಳೂರಿನಿಂದ ಸಿದ್ದಗಂಗಾ ಮಠಕ್ಕೆ ತೆರಳಿದ್ದರು, ಈ ವೇಳೆ ಮಧ್ಯಾಹ್ನ ಊಟದ ನಂತರ ರಂಜಿತ್ ಗೋಕಟ್ಟೆ ಬಳಿ ತೆರಳಿದ್ದು, ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ, ಆಗ ರಂಜಿತ್ ಸ್ನೇಹಿತರಾದ ಶಂಕರ್ ಮತ್ತು ಹರ್ಷಿತ್ ಆತನನ್ನು ರಕ್ಷಿಸಲು ನೀರಿಗೆ ಜಿಗಿದಿದ್ದಾರೆ ಆದರೆ ಈಜು ಬಾರದ ಕಾರಣ ಮುಳುಗಲಾರಂಭಿಸಿದ್ದಾರೆ, ಆಗ ಮಕ್ಕಳನ್ನು ರಕ್ಷಿಸಲು ಲಕ್ಷ್ಮೀ ಕೂಡ ನೀರಿಗೆ ಇಳಿದಿದ್ದು ಆಕೆಯು ಸಹ ನೀರಿನಲ್ಲಿ ಮುಳುಗಿದ್ದಾರೆ ಆಗ ಅಲ್ಲೇ ಇದ್ದ ಮಹದೇವಪ್ಪ ಇವರುಗಳನ್ನು ಕಾಪಾಡಲು ಗೋಕಟ್ಟೆಗೆ ಜಿಗಿದಿದ್ದು ದುರಾದೃಷ್ಟವಶ ಎಲ್ಲರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ, ಅದೃಷ್ಟವಶಾತ್ ರಂಜಿತ್ ಬದುಕುಳಿದಿದ್ದಾನೆ.