ಹಲವಾರು ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಾ ಬಂದಿರುವ NHM ನೌಕರರನ್ನು ಖಾಯಂ ಮಾಡುವಂತೆ ಆಗ್ರಹ ಕೇಳಿ ಬಂದಿತ್ತು, ಈಗ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಖಾಯಂ ಮಾಡಲು ಸಂಘದ ಅಧ್ಯಕ್ಷ ಎಚ್. ಕೆ. ಅಶ್ವಥ್ ಒತ್ತಾಯಿಸುತ್ತಿದ್ದಾರೆ.
ಈ ಹಿಂದೆ ಎನ್ಎಚ್ಎಂ ನೌಕರರನ್ನು ಖಾಯಂಗೊಳಿಸುವಂತೆ 40 ದಿನಗಳ ಕಾಲ ಪ್ರತಿಭಟನೆಯನ್ನು ನೆಡೆಸಲಾಗಿತ್ತಾದರೂ ಈ ಹಿಂದಿನ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ, ಆದರೆ ಈಗಿನ ಹಾಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಖಾಯಂಗೊಳಿಸುತ್ತೇವೆ ಎಂದು ಭರವಸೆ ನೀಡಿ ಪ್ರಣಾಳಿಕೆಯಲ್ಲಿಯೂ ಘೋಷಿಸುವುದಾಗಿ ಹೇಳಿದ್ದರು.
ಅವರು ಭರವಸೆ ನೀಡಿರುವಂತೆ ಎನ್ಎಚ್ಎಂ ನೌಕರರನ್ನು ಇದೇ ಆಗಸ್ಟ್ 15 ಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಖಾಯಂಗೊಳಿಸಿ ಎಂದು ಸಂಘದ ಅಧ್ಯಕ್ಷರುಗಳು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದು ಸರ್ಕಾರದಿಂದ ಯಾವ ರೀತಿ ಪ್ರತಿಕ್ರಿಯೆ ಬರಲಿದೆ ಎಂದು ಕಾದು ನೋಡಬೇಕಿದೆ.