ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿಗಳ ಕೊರತೆ

ಆರೋಗ್ಯ ಇಲಾಖೆಯಲ್ಲಿ ಔಷಧಿಗಳ ಕೊರತೆ ಇರುವುದರಿಂದ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿಗಳನ್ನು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ, ಔಷಧಿಗಳ ಕೊರತೆ ಇರುವುದನ್ನು ಸತಃ ಸರ್ಕಾರವೇ ಒಪ್ಪಿಕೊಂಡಿದೆ.

ಪ್ರಸಕ್ತ ಸಾಲಿನಲ್ಲಿ 600 ಕೋಟಿ ಮೊತ್ತದ 733 ಔಷಧಿಗಳಿಗೆ ಬೇಡಿಕೆ ಬಂದಿದೆ ಆದರೆ ಆರೋಗ್ಯ ಇಲಾಖೆಯ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಮುಖ್ಯವಾಗಿ ಬೇಕಾಗುವ ಮತ್ತು ಗಂಭೀರ ಕಾಯಿಲೆಗಳನ್ನು ನಿವಾರಿಸುವ ಔಷಧ ಕೊರತೆ ಉಂಟಾಗಿದೆ, ಇದರಿಂದ ಆಸ್ಪತ್ರೆಯಲ್ಲಿರುವ ರೋಗಿಗಳು ಔಷಧಿಗಳನ್ನು ಪಡೆಯಲು ಪರದಾಡುವಂತಾಗಿದೆ.

ಬಾಕಿ ಬಿಲ್ ಪಾವತಿಯಾಗದೆ ಇರುವುದಕ್ಕೆ ಪ್ರತಿ ವರ್ಷವೂ ಟೆಂಡರ್ ಗಳಲ್ಲಿ ಭಾಗಿಯಾಗುತ್ತಿದ್ದ ಕಂಪನಿಗಳು ಈ ಭಾರಿ ಹಿಂದೇಟು ಹಾಕಿವೆ, ಪ್ರತಿ ವರ್ಷವೂ ನೂರಾರು ಕೋಟಿ ರೂ ಮೌಲ್ಯದ ಆಂಟಿಬಯೋಟಿಕ್ ಮಾತ್ರೆ, ಸರ್ಜಿಕಲ್ ಗ್ಲೌಸ್, ಮಾಸ್ಕ್, ಇತರೆ ವೈದ್ಯಕೀಯ ಸಲಕರಣೆಗಳು ಸೇರಿ ವಿವಿಧ ಔಷಧಿಗಳನ್ನು ಖರೀದಿ ಮಾಡಿ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತಿತ್ತು, ಆದರೆ ಈ ಭಾರಿ ಔಷಧಿಗಳು ಕೊರತೆ ಇರುವುದರಿಂದ ಎಲ್ಲಾ ಬಗೆಯ ವೈದ್ಯಕೀಯ ಸಲಕರಣೆಗಳಲ್ಲಿ ವೆತ್ಯಾಸವಾಗುವ ಸಾಧ್ಯತೆಗಳು ಇವೆ.