ಚಂದ್ರಯಾನ -3 ಯಶಸ್ವಿ ಲ್ಯಾಂಡಿಂಗ್ ಸಂಭ್ರಮದಲ್ಲಿರುವ ಇಸ್ರೋ ಇದೀಗ ಸೂರ್ಯನತ್ತ ತನ್ನ ಆದಿತ್ಯ – ಎಲ್ 1 ನೌಕೆಯನ್ನು ಉಡಾವಣೆ ಮಾಡಲು ಸಜ್ಜಾಗಿದೆ.

ಆದಿತ್ಯ – ಎಲ್ 1 ನೌಕೆಯನ್ನು ಶ್ರೀಹರಿಕೋಟಾದಿಂದ ಸೆಪ್ಟೆಂಬರ್ 2 ರಂದು ಬೆಳಗ್ಗೆ 11:50 ಕ್ಕೆ ಉಡಾವಣೆ ಮಾಡಲಿದ್ದು, ಇದು ಭಾರತದ ಪ್ರಪ್ರಥಮ ಬಾಹ್ಯಕಾಶ ಆಧಾರಿತ ಸೌರ ವೀಕ್ಷಣಾಲಯವಾಗಿದೆ ಇದು ಭೂಮಿಯಿಂದ ಅಂದಾಜು 15 ಲಕ್ಷ ಕಿ.ಮೀ ದೂರದ ಕಕ್ಷೆಯಲ್ಲಿದ್ದು ಅಧ್ಯಯನ ನೆಡಸಲಿದೆ, ನಿಗದಿತ ಕಕ್ಷೆಯನ್ನು 4 ತಿಂಗಳಲ್ಲಿ ತಲುಪಲಿದೆ ಎಂದು ಇಸ್ರೋ ತಿಳಿಸಿದೆ.