ದೆಹಲಿಯಲ್ಲಿರುವ ಜಾಮಾ ಮಸೀದಿ ಸೇರಿ ವಕ್ಫ್ ಮಂಡಳಿಗೆ ಸೇರಿದ 123 ಆಸ್ತಿಗಳನ್ನು ಕೇಂದ್ರ ಸರ್ಕಾರ ವಶಪಡಿಸಿಕೊಳ್ಳಲು ನೋಟಿಸ್ ನೀಡಿದೆ.
ವಕ್ಫ್ ಬೊರ್ಡ್ ಅಕ್ರಮವಾಗಿ ವಶ ಪಡಿಸಿಕೊಂಡಿರುವ ಹಿಂದೂಗಳ ಆಸ್ತಿಗಳನ್ನು ಇದೀಗ ಕೇಂದ್ರದಲ್ಲಿರುವ ಮೋದಿ ಸರ್ಕಾರ ತನ್ನ ವಶಕ್ಕೆ ಪಡೆಯಲು ನೋಟೀಸ್ ನೀಡಿದೆ.
ಮಸೀದಿಗಳು, ದರ್ಗಾಗಳು ಮತ್ತು ಸ್ಮಶಾನಗಳನ್ನು ಒಳಗೊಂಡಿರುವ 123 ವಕ್ಫ್ ಬೋರ್ಡ್ ಆಸ್ತಿಗಳನಿಯಂತ್ರಣವನ್ನು ವಹಿಸಿಕೊಳ್ಳಲು ಈ ವರ್ಷದ ಫೆಬ್ರವರಿಯಲ್ಲಿ ಸಚಿವಾಲಯ ನಿರ್ಧಾರ ತೆಗೆದುಕೊಂಡಿತ್ತು. ಇಬ್ಬರು ಸದಸ್ಯರನ್ನೊಳಗೊಂಡ ಸಮಿತಿ ನೀಡಿದ ಶಿಫಾರಸುಗಳನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗ ಅದರ ಮುಂದುವರಿದ ಭಾಗವಾಗಿ ನೋಟಿಸ್ ನೀಡಿದೆ.
ಫೆಬ್ರವರಿ 8 ರ ಪತ್ರದಲ್ಲಿ, ಉಪ ಭೂಮಿ ಮತ್ತು ಅಭಿವೃದ್ಧಿ ಅಧಿಕಾರಿ 123 ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳಿಂದ ಅದನ್ನು “ಮುಕ್ತಗೊಳಿಸುವ ನಿರ್ಧಾರದ ಬಗ್ಗೆ ವಕ್ಫ್ ಮಂಡಳಿಗೆ ಪತ್ರಬರೆದಿದ್ದಾರೆ ಎಂದು ವರದಿಯಾಗಿತ್ತು. ಡಿನೋಟಿಫೈಡ್ ವಕ್ಫ್ ಆಸ್ತಿಗಳ ವಿಷಯದ ಕುರಿತು ನ್ಯಾಯಮೂರ್ತಿ (ನಿವೃತ್ತ) ಎಸ್‌ಪಿ ಗಾರ್ಗ್ ನೇತೃತ್ವದ ದ್ವಿಸದಸ್ಯ ಸಮಿತಿಯು ತನ್ನ ವರದಿಯಲ್ಲಿ ದೆಹಲಿ ವಕ್ಫ್ ಬೋರ್ಡ್ ಯಾವುದೇ ಪ್ರಾತಿನಿಧ್ಯ ಅಥವಾ ಆಕ್ಷೇಪಣೆಯನ್ನು ಸ್ವೀಕರಿಸಿಲ್ಲ ಎಂದು ಕೇಂದ್ರ ಸಚಿವಾಲಯದ ಭೂಮಿ ಮತ್ತು ಅಭಿವೃದ್ಧಿ ಕಚೇರಿ (ಎಲ್ & ಡಿಒ) ಹೇಳಿದೆ ಎಂದು ವರದಿಯಾಗಿದೆ.
“ದಿಲ್ಲಿ ವಕ್ಫ್ ಮಂಡಳಿಯು ಪಟ್ಟಿ ಮಾಡಲಾದ ಆಸ್ತಿಗಳಲ್ಲಿಯಾವುದೇ ಪಾಲನ್ನು ಹೊಂದಿಲ್ಲ ಅಥವಾ ಅವರು ಆಸ್ತಿಗಳಲ್ಲಿ ಯಾವುದೇ ಆಸಕ್ತಿಯನ್ನು ತೋರಿಸಿಲ್ಲ ಅಥವಾ ಯಾವುದೇ ಆಕ್ಷೇಪಣೆಗಳು ಅಥವಾ ಹಕ್ಕುಗಳನ್ನು ಸಲ್ಲಿಸಿಲ್ಲ ಎಂಬುದು ಮೇಲಿನಸಂಗತಿಗಳಿಂದ ಸ್ಪಷ್ಟವಾಗಿದೆ. ಆದ್ದರಿಂದ, ದೆಹಲಿ ವಕ್ಫ್ ಮಂಡಳಿಯನ್ನು ಈ ‘123 ವಕ್ಫ್ ಆಸ್ತಿಗಳಿಗೆ’ ಸಂಬಂಧಿಸಿದ ಎಲ್ಲಾ ವಿಷಯಗಳಿಂದ ಮುಕ್ತಗೊಳಿಸಲು ನಿರ್ಧರಿಸಲಾಗಿದೆ.” ಎಂದು ಎಲ್& ಡಿಒ ಪತ್ರದಲ್ಲಿ ತಿಳಿಸಲಾಗಿದೆ.
ಮೇ ತಿಂಗಳಲ್ಲಿ ದೆಹಲಿ ಹೈಕೋರ್ಟ್ 123 ಆಸ್ತಿಗಳ ಭೌತಿಕ ತಪಾಸಣೆ ನಡೆಸಲು ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ದೆಹಲಿ ವಕ್ಫ್ ಬೋರ್ಡ್ ಮತ್ತು ಕೇಂದ್ರ ಸರ್ಕಾರ ಎರಡೂ ತಮ್ಮ ಸ್ವಾಧೀನಕ್ಕೆ ಹಕ್ಕು ಸಲ್ಲಿಸಿರುವುದರಿಂದ ಈ ಆಸ್ತಿಗಳು ಪ್ರಸ್ತುತ ವಿವಾದದಲ್ಲಿದೆ.