ನೀರಿಲ್ಲದೆ ಬತ್ತಿದ್ದ ಜಾಗದಲ್ಲಿ ಬಾನೆತ್ತರಕ್ಕೆ ಚಿಮ್ಮಿದ ನೀರು

ಬೆಂಗಳೂರು ನಗರದ ಅಂದರಹಳ್ಳಿಯಲ್ಲಿ ಈಗಾಗಲೇ ನೀರಿಗಾಗಿ ಆಹಾಕಾರ ಉಂಟಾಗಿದೆ ಇರುವ ಕೊಳವೆಬಾವಿಗಳಲ್ಲಿನ ನೀರು ಬಾರದೆ ಬತ್ತಿದ್ದು ಹೊಸದಾಗಿ ಸಾಕಷ್ಟು ಬೋರ್ ವೆಲ್ ಗಳನ್ನು ಕೊರೆದರೂ ಯಾವುದೇ ಬೋರ್ ಗಳಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ಸಿಕ್ಕಿರಲಿಲ್ಲ ಹಾಗೂ ನೀರಿಲ್ಲದೆ ಅಲ್ಲಿನ ಜನ ತಮ್ಮ ಮನೆಗಳಿಗೆ ಟ್ಯಾಂಕರ್ ಗಳಲ್ಲಿ ನೀರನ್ನು ಸರಬರಾಜು ಮಾಡಿಸಿಕೊಳ್ಳುವಂತಹ ಪರಿಸ್ಥಿತಿ ಉಂಟಾಗಿದೆ.

ಸುತ್ತಲೂ ಹತ್ತಾರು ಬೋರ್ ಗಳನ್ನು ಒಂದು ಸಾವಿರ ಅಡಿವರೆಗೆ ಕೊರೆದರೂ ಫೇಲ್ ಆಗುತ್ತಿದ್ದ ಜಾಗದಲ್ಲಿ ಕೇವಲ 220 ಅಡಿಗೆ ಕೊರೆಯಲು ಸಾಧ್ಯವಾಗದಷ್ಟು ನೀರು ಸಿಕ್ಕಿದ್ದು, ಬೋರ್ ವೆಲ್ ನಿಂದ ನೀರು ಚಿಮ್ಮುತ್ತಿದ್ದನ್ನು ಅಲ್ಲಿನ ಜನರು ಆಶ್ಚರ್ಯದಿಂದ ನೋಡುತ್ತಿದ್ದರು, ಅಕ್ಕ ಪಕ್ಕದ ನಗರದ ಜನಗಳು ಬಂದು ಬೋರ್ ವೆಲ್ ನಿಂದ ಚಿಮ್ಮುತ್ತಿದ್ದ ನೀರನ್ನು ನೋಡಿ ಆಶ್ಚರ್ಯದಿಂದ ಸಂತಸ ವ್ಯಕ್ತಪಡಿಸುತ್ತಿದ್ದರು.