ಗುಬ್ಬಿ ! ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ, 8 ಜನರ ಬಂಧನ

ಗುಬ್ಬಿ: ಅಕ್ರಮ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಎಂಟು ಜನರನ್ನು ಗುಬ್ಬಿ ಪೊಲೀಸರು ಬಂಧಿಸಿದ್ದು, 31 ಸಾವಿರದ 65 ರೂಗಳನ್ನು ವಶಕ್ಕೆ ಪಡೆದ ಘಟನೆ ತಾಲ್ಲೂಕಿನ ಮಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಖಚಿತ ಮಾಹಿತಿ ಆಧರಿಸಿದ ಗುಬ್ಬಿ ಪಿ.ಎಸ್.ಐ ದೇವಿಕಾ ದೇವಿ ಅವರ ನೇತೃತ್ವದ ತಂಡ ತಾಲ್ಲೊಕಿನ ಮಡೇನಹಳ್ಳಿ ಗ್ರಾಮದ ಸಾರ್ವಜನಿಕ ಪ್ರದೇಶದಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ನಡೆಸಿ 8 ಜನರನ್ನು ಬಂಧಿಸಿದ್ದು ಮತ್ತೆ 4 ಜನ ತಲೆ ಮರೆಸಿಕೊಂಡಿರುವುದಾಗಿ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಮೊ.ನಂ.249 ಕಲಂ 87 ರ ಕೆಪಿ ಆಕ್ಟ್ ರೀತಿ ಪ್ರಕರಣ ದಾಖಲಿಸಿಕೊಂಡಿದ್ದಾರೆ, ತಲೆಮರೆಸಿಕೊಂಡಿರುವ ಮೂರ್ನಾಲ್ಕು ಮಂದಿಯ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ.