ಬೆಂಗಳೂರು : ಬೆಂಗಳೂರಿನ ಹೆಸರಾಂತ ಆಸ್ಪತ್ರೆಗಳಲ್ಲಿ ಒಂದಾದ ದಯಾನಂದ ಸಾಗರ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವ್ಯವಸ್ಥಾಪಕರಾದ ಶ್ರೀಯುತ ಎಚ್. ಕುಮಾರ್ ಅವರು ಇಂದು 54 ನೇ ಬಾರಿ ರಕ್ತದಾನ ಮಾಡಿ ಹಲವಾರು ಯುವ ಜನರಿಗೆ ಹಾಗೂ ಸ್ನೇಹಿತರಿಗೆ ಸ್ಫೂರ್ತಿದಾಯಕರಾಗಿದ್ದಾರೆ.
ಹಲವಾರು ವರ್ಷಗಳ ಹಿಂದೆ ರಕ್ತನಿಧಿ ಕೇಂದ್ರದಲ್ಲಿ ಸಾಮಾನ್ಯ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಾ ಬೆಳೆದಿದ್ದ ಅವರು ಈಗಾಗಲೇ ಸುಮಾರು ವರ್ಷಗಳಿಂದ ದಯಾನಂದ ಸಾಗರ್ ಒಡೆತನದ ಸಾಗರ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಅವರು ಇಂದು ಈ ಸ್ಥಾನಕ್ಕೆ ಬೆಳೆದು ಬಂದ ದಾರಿ ಸುಲಭವೇನಲ್ಲ.
ಇಡೀ ತಮ್ಮ ಜೀವನವನ್ನೇ ರಕ್ತನಿಧಿ ಕೇಂದ್ರಕ್ಕೋಸ್ಕರ ಮುಡಿಪಾಗಿಟ್ಟಿರುವ ಅವರು ಅದೆಷ್ಟೋ ಬಡ ರೋಗಿಗಳ ನೆರವಿಗೆ ದಾವಿಸಿ ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಟ್ಟಿದ್ದಾರೆ. ಕೋರೋನ ಬಂದ ಸಂದರ್ಭದಲ್ಲಿ ಯಾರು ಸಹ ರಕ್ತದಾನ ಮಾಡಲು ಬಾರದೆ ಇದ್ದಾಗ ರೋಗಿಗಳಿಗೆ ಅಗತ್ಯ ಪ್ರಮಾಣದ ರಕ್ತವನ್ನು ಹೊಂದಿಸಲು ಸಾಧ್ಯವಾಗುತ್ತಿರಲಿಲ್ಲ ಆಗ ಪ್ರತಿಯೊಬ್ಬರಿಗೂ ದೂರವಾಣಿಯ ಮೂಲಕ ಕರೆ ಮಾಡಿ ಅವರನ್ನು ಕರೆಸಿ ಮನವೊಲಿಸಿ ರಕ್ತದಾನ ಮಾಡುವಂತೆ ಮನವಿ ಮಾಡುತ್ತಿದ್ದರು.
ಇಡೀ ಸಾಗರ್ ಆಸ್ಪತ್ರೆಯ ಸಂಸ್ಥೆಯಲ್ಲಿ ಇವರು ಬ್ಲಡ್ ಬ್ಯಾಂಕ್ ಕುಮಾರ್ ಎಂದೇ ಪ್ರಸಿದ್ಧ, ಹಾಗೂ ಇವರ ಕರ್ತವ್ಯ ನಿಷ್ಠೆ, ಕಾರ್ಯವೈಖರಿಗೆ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಇವರು ಬಹಳ ಅಚ್ಚು ಮೆಚ್ಚು.